¡Sorpréndeme!

Bigg Boss Kannada Season 5 : ಇನ್ಮುಂದೆ ಅಡುಗೆ ಮಾಡೋದಿಲ್ಲ ಅಂದ್ರು ಸಿಹಿ ಕಹಿ ಚಂದ್ರು | Filmibeat Kannada

2017-11-22 697 Dailymotion

ಇನ್ಮುಂದೆ 'ಬಿಗ್ ಬಾಸ್' ಮನೆಯಲ್ಲಿ ಸಿಹಿ ಕಹಿ ಚಂದ್ರು ಅಡುಗೆ ಮಾಡಲ್ವಂತೆ! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎಲ್ಲಾ ಕಿತ್ತಾಟಗಳ ಕೇಂದ್ರ ಬಿಂದು 'ಅಡುಗೆ ಮನೆ'.! ಬರೀ ಊಟದ ವಿಚಾರಕ್ಕೆ ಸ್ಪರ್ಧಿಗಳು ಜಗಳ ಆಡುತ್ತಿರುವುದು ಒಂದ್ಕಡೆ ಆದರೆ... ಪದೇ ಪದೇ ಗ್ಯಾಸ್ ಆಫ್ ಮಾಡದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವ ಸ್ಪರ್ಧಿಗಳು ಇನ್ನೊಂದು ಕಡೆ. ಈಗಾಗಲೇ ಅನೇಕ ಬಾರಿ ಗ್ಯಾಸ್ ಆಫ್ ಮಾಡದ ಕಾರಣ ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ಇಷ್ಟಾದರೂ, 'ಬಿಗ್ ಬಾಸ್' ಸ್ಪರ್ಧಿಗಳು ಎಚ್ಚರಗೊಂಡಿಲ್ಲ. ಟಾಸ್ಕ್ ಗಡಿಬಿಡಿಯಲ್ಲಿ ಸಿಹಿ ಕಹಿ ಚಂದ್ರು ಗ್ಯಾಸ್ ಆಫ್ ಮಾಡದ ಕಾರಣ, ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ತಮ್ಮಿಂದ ಈ ತಪ್ಪು ಪುನರಾವರ್ತಿತವಾದ ಕಾರಣ ''ಇನ್ಮೇಲೆ ಅಡುಗೆ ಮಾಡಲ್ಲ'' ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ.